ಈವತ್ತಿನ ದಿನಮಾನದಲ್ಲಿ ಸಾಮಾನ್ಯವಾಗಿ ಜನರು ತಮ್ಮದೇ ಆದ ಸಮಸ್ಯೆಗಳಲ್ಲಿ ನೊಂದು-ಬೆಂದು ಇತರರೆಡೆಗೆ ದಿವ್ಯ ಔದಾಸೀನ್ಯವನ್ನು ತಳೆಯುವುದು ಎಲ್ಲರೂ ಬಲ್ಲ ವಿಷಯವೇ ಸರಿ. ನಾವು ಕಛೇರಿಗೆ ಅಥವಾ ಬೇರೆಲ್ಲಾದರೂ ಹೋಗುವಾಗ ಯಾರಾದರೂ ಅಪರಿಚಿತರು ತೊಂದರೆಯಲ್ಲಿ ಸಿಲುಕಿದ್ದಾಗ ಅವರಿಗೆ ಸಹಾಯಹಸ್ತ ಚಾಚುವ ಬದಲು "ನಮಗೇಕೆ ಬೇಕು ಅವರಿವರ ಉಸಾಬರಿ" ಎಂದು ಕಂಡೂ ಕಾಣದ ಹಾಗೆ ಹೊರಡುತ್ತೇವೆ. ತೊಂದರೆಯಲ್ಲಿದ್ದಂತೆ ನಟಿಸಿ ಜನರನ್ನು ದೋಚುವ ಪುಂಡರ, ದುಷ್ಕರ್ಮಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದೂ ಈ ಬೆಳವಣಿಗೆಗೆ ಕಾರಣೀಭೂತವಾಗಿದೆ ಎಂಬುದು ಅತಿಶಯೋಕ್ತಿಯೇನಲ್ಲ.
ಆದರೆ ಇಂದಿಗೂ ಮಾನವೀಯ ಮುಖವನ್ನು ಹೊಂದಿ ಸಮಾಜಸೇವೆಯನ್ನೇ ಧ್ಯೇಯವನ್ನಾಗಿಸಿಕೊಂಡ ಹಲವಾರು N G O ಗಳನ್ನು ನಾವು ಕಾಣಬಹುದು.
ಅಂತಹದ್ದೇ ಒಂದು ತಾಜಾ ಉದಾಹರಣೆ "ವೀ ಕೇರ್ ಚಾರಿಟೀಸ್ (ರಿ)".
ಮೈಸೂರು ಜಿಲ್ಲೆಯ ತಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿ ಎಂಬ ಚಿಕ್ಕ ಊರಿನ ಪ್ರಶಾಂತ ವಾತಾವರಣದಲ್ಲಿರುವ ಸಂಸ್ಥೆಯು ಮಾನಸಿಕವಾಗಿ ಅಸ್ವಸ್ಥಗೊಂಡು ಬೀದಿಗೆ ಬಿದ್ದು 'ಹುಚ್ಚ'ರೆಂದು ಸಮಾಜದಿಂದ ಅಸಡ್ಡೆಗೆ ಒಳಗಾದ ನಿರಾಶ್ರಿತ ಮಾನಸಿಕ ರೋಗಿಗಳನ್ನು ಕರೆತಂದು ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಅವರನ್ನು ಸ್ವಾವಲಂಬಿಗಳನ್ನಾಗಿಸಿ ಮುಖ್ಯವಾಹಿನಿಗೆ ತರುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಶ್ರಮಿಸುತ್ತಿದೆ.ಮಾನಸಿಕ ರೋಗಿಗಳಿಗೆ ಅಲೋಪತಿ, ಆಯುರ್ವೇದ, ಯೋಗ ಹಾಗೂ ಮನಶಾಸ್ತ್ರಗಳ ಮೂಲಕ ಚಿಕಿತ್ಸೆ ನೀಡಲೆಂದು ಪ್ರಾರಂಭಗೊಂಡ ಸಂಸ್ಥೆಯು ಕಾಲಕ್ರಮೇಣ ಕುಡಿತ,ಧೂಮಪಾನದಂತಹ ಮಾದಕ ದುಶ್ಚಟಗಳ ದಾಸರಾದವರಿಗೂ ಚಿಕಿತ್ಸೆ ನೀಡಿ ಅವರನ್ನು ಸರಿದಾರಿಗೆ ತರುವ ಕಾಯಕವನ್ನೂ ಮಾಡುತ್ತಿದೆ.
ಸ್ವಸ್ಥ ಸಮಾಜದ ನಿರ್ಮಾಣವೇ ಧ್ಯೇಯವನ್ನಾಗಿಸಿಕೊಂಡು ದುಡಿಯುತ್ತಿರುವ ಸಮಾನ ಮನಸ್ಕ ಯುವಕರ ತಂಡಕ್ಕೆ ರೈಟ್ ಲೈವ್ಲಿ ಹುಡ್ ಪ್ರಶಸ್ತಿ ವಿಜೇತ ಡಾ.ಎಚ್.ಆರ್. ಸುದರ್ಶನ್, ಡಾ ರಾಜ್ ಗೋಪಾಲ್ ಅಂತಹ ಹಿರಿಯರು ಬೆನ್ನೆಲುಬಾಗಿ ನಿಂತು ಈ ಸಂಸ್ಥೆಯನ್ನು ಮಾದರಿ ಸಂಸ್ಥೆಯಾಗಿ ಬೆಳೆಸಿದ್ದಾರೆ.
ಮಾನಸಿಕ ರೋಗಿಗಳಿಗೆ ಪರಿಣಿತ ವೈದ್ಯರಿಂದ ಚಿಕಿತ್ಸೆ ಕೊಡಿಸುವುದರ ಜೊತೆಗೆ ಧ್ಯಾನ, ಯೋಗ ಮತ್ತು ಆಪ್ತ ಸಲಹೆಯ ಮುಖಾಂತರ ಅವರನ್ನು ಪರಿವರ್ತಿಸಲಾಗುತ್ತದೆ. ಹೀಗೆ ಗುಣಮುಖರಾದ ರೋಗಿಗಳನ್ನು ಸ್ವಾವಲಂಬಿಗಳನ್ನಾಗಿಸುವುದರ ಜೊತೆಗೆ ಪ್ಲಾಸ್ಟಿಕ್ ನಿರ್ಮೂಲನೆಯ ಪಣ ತೊಟ್ಟ ಸಂಸ್ಥೆಯು ಇವರಿಂದ ಹತ್ತಿಯ ಕೈಚೀಲಗಳನ್ನು (ಕಾಟನ್ ಬ್ಯಾಗ್ಸ್) ತಯಾರಿಸುವ ಹಾಗೂ ಅವುಗಳನ್ನು ಮಾರುಕಟ್ಟೆಗೆ ತಲುಪಿಸುವ ಕೆಲಸದ ಜೊತೆಗೆ ಹೊಲಿಗೆ ಯಂತ್ರ ಹೊಂದಿದ ಗ್ರಾಮೀಣ ಮಹಿಳೆಯರಿಗೂ ಕಸೂತಿ ಕೆಲಸವನ್ನು ನೀಡುವ ನಿಟ್ಟಿನಲ್ಲಿ ಸಾಗಿದೆ.
ಸಂಸ್ಥೆಯ ಆಧಾರ ಸ್ತಂಭಗಳಾದ ಮನು.ಬಿ. (ಸ್ಥಾಪಕ ಹಾಗೂ ಧರ್ಮದರ್ಶಿ) ಮತ್ತು ವಿನೋದ್ (ಕಾರ್ಯದರ್ಶಿ)ಇವರುಗಳ ಪ್ರಕಾರ ಮಾನಸಿಕ ರೋಗಿಗಳಲ್ಲಿ ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿ ಅವರ ಮನಸ್ಸಿನ ಮೇಲೆ ಉಂಟಾದ ಒತ್ತಡದ ಕಾರಣದಿಂದ ಚಿತ್ತವೈಕಲ್ಯದಿಂದ ನರಳುತ್ತಿದ್ದಾರೆ. ಆದ್ದರಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಒತ್ತಡ ನಿಭಾವಣೆಯ ಬಗ್ಗೆ ಸಲಹೆ,ಮಾರ್ಗದರ್ಶನ ನೀಡಿದಲ್ಲಿ ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಆ ಸಲುವಾಗಿ ಸಂಸ್ಥೆಯು ಕರ್ನಾಟಕದ ಯಾವುದೇ ಮೂಲೆಯ ಶಾಲೆಯವರು 'ಆಪ್ತ ಸಲಹೆ' (ಕೌನ್ಸಿಲಿಂಗ್) ನೀಡಲು ಆಹ್ವಾನಿಸಿದಲ್ಲಿ ಅಲ್ಲಿಗೆ ತೆರಳಿ ಮಕ್ಕಳಲ್ಲಿ ಒತ್ತಡ ನಿರ್ವಹಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಂಸ್ಥೆಯು ನೀಡುವ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ನಮ್ಮ ರಾಜ್ಯದ ಮಾನಸಿಕ ರೋಗಿಗಳಿಗಿಂತ ಹೊರರಾಜ್ಯಗಳಿಂದ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಚಿಂತಿಸಬೇಕಾಗಿದೆ. ಹೊರರಾಜ್ಯಗಳಿಂದ ಬರುವ ಸರಕು ಸಾಗಣೆ ಲಾರಿಗಳಲ್ಲಿ ಮಾನಸಿಕ ಅಸ್ವಸ್ಥರನ್ನು ಕರೆತಂದು ಕರ್ನಾಟಕದಲ್ಲಿ ಬಿಡಲಾಗುತ್ತಿದೆ. ಆದ್ದರಿಂದ ಗಡಿಭಾಗದ ಚೆಕ್ ಪೋಸ್ಟುಗಳಲ್ಲಿ ಸೂಕ್ತ ತಪಾಸಣೆ ನಡೆದಲ್ಲಿ ಇದನ್ನು ತಡೆಗಟ್ಟಬಹುದು. ಆಗ ನಮ್ಮ ರಾಜ್ಯದ ಮಾನಸಿಕ ರೋಗಿಗಳತ್ತ ಹೆಚ್ಚು ಗಮನ ನೀಡಬಹುದು.
ಸಂಸ್ಥೆಯ ಈ ಸಮಾಜ ಸೇವಾ ಕಾರ್ಯಕ್ಕೆ ಸಹಾಯಹಸ್ತ ನೀಡ ಬಯಸುವವರು ಹಾಗೂ ಸೇವೆಯ ಸದುಪಯೋಗಪಡಿಸಿಕೊಳ್ಳಬಯಸುವವರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ದೂ.ಸಂ. 8951136638
8951184978
8904423233
9008847457