![]() |
ಕೃಪೆ : ಅಂತರ್ಜಾಲ |
ರೆಸ್ಟೋರೆಂಟಲ್ಲಿದ್ದ ಗಿರಾಕಿಗಳೆಲ್ಲ ನಾಣಿ ಕಡೆ ಆಶ್ಚರ್ಯದಿಂದ ನೋಡ್ತಿದ್ದಾರೆ. ಮ್ಯಾನೇಜರ್ ಗಾಬರಿ ಬಿದ್ದು ನಾಣಿ ಕೂತಿದ್ದ ಟೇಬಲ್ ಹತ್ತಿರ ಓಡಿ ಬಂದ.
ಮ್ಯಾನೇಜರ್ : Sorry for the inconvenience sir, what happened sir? any problems?
ನಾಣಿ : ಏನ್ರೀ ಟೇಬಲ್ ಕ್ಲೀನ್ ಮಾಡೋ ಹುಡುಗನಿಗೆ ಎಷ್ಟು ಕೊಬ್ಬು?
ಮ್ಯಾನೇಜರ್ : ಏನಾಯ್ತು ಸರ್? ಏನಂದ ಆ ಹುಡುಗ?
ನಾಣಿ : ನಾನು ಮೊಬೈಲಲ್ಲಿ ಮಾತಾಡ್ತಿದ್ದೆ. ಪ್ಲೇಟಲ್ಲಿ ಇನ್ನೂ ಬಿರ್ಯಾನಿ ಇದ್ರೂ ತಗೊಂಡು ಹೋಗ್ತಿದ್ದ. Are You Hurry ? ಅಂತ ಕೇಳಿದ್ರೆ yes sir ಅಂತ ನಂಗೇ ಉಲ್ಟಾ ಮಾತಾಡ್ತಾನೆ.
ನಿಜವಾಗ್ಲೂ ನಡೆದದ್ದು ಏನು? ನಾಣಿ ಹಾಗೆ ಕೂಗಾಡಿದ್ದು ಯಾಕೆ? ಆ ಹುಡುಗ ನಿಜಕ್ಕೂ ಉದ್ಧಟತನದ ಉತ್ತರ ಕೊಟ್ನಾ? ಮ್ಯಾನೇಜರ್ ಗೆ ಎಲ್ಲವೂ ಅರ್ಥ ಆಯ್ತು.
ಮ್ಯಾನೇಜರ್ : Sorry sir , ಆ ಹುಡುಗನ ಹೆಸರು "ಹರಿ" ಅಂತ.
ನಾಣಿ : ಸಾಕು ಬಿಡಿ ಎಲ್ಲಾ ಅರ್ಥ ಆಯ್ತು.
ಎಲ್ಲರನ್ನೂ ಪೆಚ್ಚು ಮಾಡೋ ನಮ್ ನಾಣಿ ತಾನೇ ಪೆಚ್ಚಾಗಿ ಕೂತ.
ಹರಿಯು ಕಕ್ಕಾ ಬಿಕ್ಕಿ, ನಾಣಿಗೆ ಬಿರಿಯಾನಿ ಕಳೆದುಕೊಂಡ ಕೋಪ. ಬಾಲ್ ತಮಾಷೆ ಮಾರಾಯ್ರೇ....
ಪ್ರತ್ಯುತ್ತರಅಳಿಸಿhttp://badari-poems.blogspot.in/