ಶನಿವಾರ, ಜನವರಿ 5, 2013

ಹೆಸರ ಹಂಗಿಲ್ಲದ ಹನಿಗಳು

ಗೆದ್ದವನು ಏದುಸಿರು ಬಿಟ್ಟ
ಸೋತವನು ನಿಟ್ಟುಸಿರ ಬಿಟ್ಟ
ಬಿಟ್ಟದ್ದು ಉಸಿರೇ ಆದರೂ
ಎಷ್ಟೊಂದು ಭಿನ್ನ - ಬದುಕಿನ ದಾರಿ ವಿಭಿನ್ನ


>>>>>>>>>>>>>>>>>>>>>>>>>>>>>>>>>>>

"ಕರುಣಾಳುಗಳ ಬೀಡು ನಮ್ಮ ಕನ್ನಡ ನಾಡು
ಶಾಂತಿ-ಸೌಹಾರ್ದತೆಯು ತುಂಬಿ ತುಳುಕಿದೆ ನೋಡು
ಚೆಲುವು-ಒಲವುಗಳ ದಿವ್ಯ ಸಮ್ಮಿಲನ
ಜನುಮ ಜನುಮವೂ ಸಿಗಲಿ ನನಗಿಲ್ಲಿ ಜನನ






>>>>>>>>>>>>>>>>>>>>>>


ನಲ್ಲೆ ನಿನ್ನ ಪ್ರೀತಿಯ ನದಿಯಲ್ಲಿ
ಎಷ್ಟು ಮಿಂದರೂ ಸಾಲದು
ಶೀತ, ನೆಗಡಿ ಯಾವುದೇ ವ್ಯಾಧಿ
ಸನಿಹಕ್ಕೂ ಬಾರದು

  
>>>>>>>>>>>>>>>>>>>>>>>>>>>>>>>>>>>>

ನಿಮ್ಮ ಮನೆಯ ಎಲ್ಲರೂ
ಬಹಳ ಒಳ್ಳೆಯವರು....ನಿಮ್ಮದು Sweet HomeU
ಹೌದು ಸ್ವಾಮೀ ನಮ್ಮದು Sweet HomeU
ನಮ್ಮ ಮನೆಯಲ್ಲಿ ಎಲ್ಲರಿಗೂ ಡಯಾಬಿಟೀಸ್  ProblemmU !! :)


>>>>>>>>>>>>>>>>>>>>>

ಆಫೀಸಿಗೆ ಹೊರಟಿದ್ದ ಗಂಡ
ಹೆಂಡತಿಗೆ ಕೇಳಿದ "ಕೊಡೆ" ಕೊಡೆ
ಅಯ್ಯೋ ಬೆಳ್ಳಂ ಬೆಳಿಗ್ಗೆ ಹಾಗೆಲ್ಲ
ಕೇಳದಿರಿ ನಾನು ಕೊಡೆ

ನಾನು ಕೇಳಿದ್ದು ನಿನ್ನ
ಸಿಹಿಮುತ್ತನ್ನಲ್ಲ ಕಣೆ
ಮಳೆ ಬರೋಹಾಗಿದೆ
umbrella ಕೊಡೆ


>>>>>>>>>>>>>>>>>>>>>>>>>>>>>>>>>>>>>>>

ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ
ಕುಡಿಯುವುದಂತೂ ಖಾತ್ರಿ
ಅವನು ದಿನವೆಲ್ಲಾ ಕುಡಿದು ಆಗುತ್ತಾನೆ ಟೈಟ್
"ಗುಂಡ್"ಮಾರ್ನಿಂಗ್, "ಗುಂಡ್"ಆಫ್ಟರ್ ನೂನ್, "ಗುಂಡ್"ನೈಟ್


>>>>>>>>>>>>>>>>>>>>>>