ಶುಕ್ರವಾರ, ಸೆಪ್ಟೆಂಬರ್ 7, 2012

ಬೆಳದಿಂಗಳ ಅಂಗಳದಲ್ಲಿ ........

ಭುವಿಯ ಬೆಳಗಲು ಅನುದಿನವೂ 
ಸೂರ್ಯ - ಚಂದ್ರರ ಜುಗಲ್ ಬಂದಿ
ಇಂದು ಹಗಲೆಲ್ಲ ಸೂರ್ಯನ ಸುಳಿವಿಲ್ಲ 
ಮೋಡಗಳ ಮರೆಯಲ್ಲಿ ಅವಿತಿದ್ದ 


ಚಂದ್ರನಿಗಂತೂ ಇಂದು ಬರುವ 
ಜರೂರತ್ತಿಲ್ಲ
ಅಮಾವಾಸ್ಯೆಯ ಇರುಳು 
ಕರೆದರೂ ಬರಲೊಲ್ಲ 


ನಲ್ಲೆ ನೀ ಬಳಿಯಿರಲು 
ಸೂರ್ಯ ಬಾರದಿದ್ದರೂ ಎನಗಿಲ್ಲ ಚಿಂತೆ 
ಚಂದಿರ ಬಾರದಿರೆ ಏನಂತೆ 
ಅಮಾವಾಸ್ಯೆಯ ಇರುಳೂ ಹಾಲು ಹುಣ್ಣಿಮೆಯಂತೆ