ಚಿತ್ರ ಕೃಪೆ : ಅಂತರ್ಜಾಲ |
ಹಂಗೆಲ್ಲಾ ಆಗಿ ಹಿಂಗಾದ್ಮೇಲೆ ಒಂದ್ ಒಳ್ಳೆ ದಿನ ಬಂತು. ಅದೇನೋ ಪ್ರೇಮಿಗಳ ದಿನ ಅಂತ ಮಾಡ್ತಾರಲ್ಲ ಆ ದಿನ. ಇವತ್ತು ಹೆಂಗಾದ್ರೂ ಮಾಡಿ ನನ್ ಹಾರ್ಟ್ ಓಪನ್ ಮಾಡಿ ನಾನು ನಾಗವೇಣಿನ ಎಷ್ಟು ಲವ್ ಮಾಡ್ತೀನಿ ಅಂತ ತೋರಿಸ್ತೀನಿ ಅಂತ ನಮ್ ನಾಣಿ ಅವನ ಫ್ರೆಂಡ್ಸ್ ಹತ್ರ ಹೇಳಿ ನಾಗವೇಣಿಗಾಗಿ ಕಾಯ್ತಾ ಕಾಲೇಜ್ ಗೇಟ್ ಹತ್ರ ನಿಂತ.ನಾಗವೇಣಿ ಅವತ್ತೇ ಲೇಟಾಗಿ ಬರಬೇಕಾ!!?? ಹುಡುಗರನ್ನು ಕಾಯಿಸೋದಂದ್ರೆ ಹುಡ್ಗೀರಿಗೆ ಅದೇನೋ ಆನಂದ. ಅಂತೂ ನಾಗವೇಣಿ ಬಂದ್ಳು. ನಮ್ ನಾಣಿ ಒಂದು ಗ್ರೀಟಿಂಗ್ ಕಾರ್ಡ್ ಕೈಯಲ್ಲಿ ಹಿಡ್ಕೊಂಡು ಅವಳ ಹಿಂದ್ಹಿಂದೆ ಹೊರಟ.
ನಾಣಿ : ಹಾಯ್ ನಾಗವೇಣಿ, ಒಂದ್ನಿಮಿಷ ನಿಂತ್ಕೋ...... ನಿಂಗೆ ಒಂದ್ ವಿಷ್ಯ ಹೇಳ್ಬೇಕು
ನಾಗವೇಣಿ : ಏನೋ? ಬೇಗ ಹೇಳು ಕ್ಲಾಸ್ ಗೆ ಹೋಗ್ಬೇಕು ಟೈಮ್ ಆಯ್ತು, ನೀವಂತೂ ಹುಡುಗ್ರು ಬಂಕ್ ಹೊಡೆಯೋದೆ ಕೆಲ್ಸ ನಿಮ್ಗೆ....
ನಾಣಿ : ಇವತ್ತು ಪ್ರೇಮಿಗಳ ದಿನ, ಅದಕ್ಕೆ ನನ್ ಲವ್ ಬಗ್ಗೆ ನಿಂಗೆ ಇವತ್ತೇ ಹೇಳ್ಬೇಕು ಅಂತ ಡಿಸೈಡ್ ಮಾಡಿದ್ದೆ. I LOVE YOU ..... ಪ್ಲೀಸ್ ನನ್ನ ಲವ್ ಮಾಡು
ನಾಗವೇಣಿ : ಏಯ್ ನಾಣಿ, ಹೆಂಗಿದೆ ಮೈಗೆ? ಇವೆಲ್ಲಾ ನನ್ ಹತ್ರ ಬೇಡ ಮರೀ...... ಇನ್ನೊಂದ್ಸಲ ನನ್ ಹಿಂದೆ ಲವ್ವು-ಗಿವ್ವು ಅಂತ ಬಂದ್ರೆ ಪ್ರಿನ್ಸಿಪಾಲ್ ಹತ್ರ ಕಂಪ್ಲೇಂಟ್ ಮಾಡ್ತೀನಿ.
ನಾಣಿ : (ಭಯದಿಂದ) ಬೇಡ ನಾಗವೇಣಿ, ಪ್ಲೀಸ್ ನಿಂಗೆ ಇಷ್ಟ ಇಲ್ಲ ಅಂದ್ರೆ ಓಕೆ. ನಾನು ನಿಂಗೆ ತೊಂದ್ರೆ ಕೊಡೋಲ್ಲ. ನಾವಿಬ್ರೂ ಫ್ರೆಂಡ್ಸ್ ಆಗಿ ಇದ್ಬಿಡೋಣ. ನನ್ ಲವ್ ಬೇಡ ಅಂದ್ಬಿಟ್ಟೆ ಆದ್ರೆ ಫ್ರೆಂಡ್ ಶಿಪ್ ಮಾತ್ರ ಬೇಡ ಅನ್ಬೇಡ ಪ್ಲೀಸ್.
ನಾಗವೇಣಿ : ಓಕೆ, ಆದ್ರೆ ಒಂದ್ ಕಂಡೀಶನ್. ಇನ್ನು ಯಾವತ್ತೂ ನನ್ನ ಲವ್ ಮಾಡ್ತೀನಿ ಅಂತ ಹಿಂದೆ ಸುತ್ತಬಾರ್ದು.
ನಾಣಿ : ಓಕೆ
ಹೀಗೆ ಪ್ರೇಮಿಗಳ ದಿನದಂದು ನಮ್ ನಾಣಿ ಬರೀ ಪ್ರೇಮಿಯಿಂದ ಭಗ್ನಪ್ರೇಮಿಯಾಗಿ ಬದಲಾದ. ಹೀಗೇ ದಿನಗಳು ಉರುಳಿದವು.ನಮ್ ನಾಣಿ ನಾಗವೇಣಿ ಜೊತೆ ಒಳ್ಳೆ ಸ್ನೇಹಿತನಾಗಿ ಇದ್ದ. ಅವತ್ತೊಂದಿನ ನಾಗವೇಣಿ ನಮ್ ನಾಣಿ ಹತ್ರ ಬಂದು ಟೆಕ್ಸ್ಟ್ ಬುಕ್ ಕೇಳಿ ತಗೊಂಡು ಹೋದ್ಳು. ಎರಡು ದಿನ ಬಿಟ್ಟು ಅವಳು ನಾಣಿಯ ಟೆಕ್ಸ್ಟ್ ಬುಕ್ ವಾಪಸ್ ಕೊಟ್ಳು. ಬುಕ್ ವಾಪಸ್ ಕೊಡುವಾಗ ಅದರೊಳಗೆ ಒಂದು ಲೆಟರ್ ಬರೆದಿಟ್ಟು ಕೊಟ್ಟಳು. ಆದ್ರೆ ಆ ಲೆಟರ್ ಬಗ್ಗೆ ನಾಣಿಗೆ ಏನೂ ಹೇಳಲಿಲ್ಲ. ಹೌದು ಅದು ಬರೀ ಲೆಟರ್ ಅಲ್ಲ ..... ಲವ್ ಲೆಟರ್ ......... ನಮ್ ನಾಣಿಗಾಗಿ ನಾಗವೇಣಿ ಬರೆದ ಲವ್ ಲೆಟರ್ .......... " ನಲ್ಮೆಯ ನಾಣಿ, ನೀನು ಅವತ್ತು ಪ್ರೇಮಿಗಳ ದಿನ ನನ್ ಹತ್ರ ಬಂದು ಪ್ರಪೋಸ್ ಮಾಡಿದಾಗ ನಂಗೆ ಸಖತ್ ಖುಷಿ ಆಯ್ತು. ಆದ್ರೆ ನಿಂಗೆ ಸ್ವಲ್ಪ ಸತಾಯಿಸಿ, ಕಾಯಿಸಿ ಆಮೇಲೆ ನನ್ ಲವ್ ಬಗ್ಗೆ ನಿಂಗೆ ಹೇಳೋಣ ಅಂತ ಸುಮ್ನೆ ಡ್ರಾಮಾ ಮಾಡಿದೆ. ನಿಜ ಹೇಳ್ತೀನಿ ನೀನಂದ್ರೆ ನಂಗೂ ಸಖತ್ ಇಷ್ಟ ಕಣೋ, ಪ್ಲೀಸ್ ಲವ್ ಮೀ" ಹೀಗಂತ ಬರೆದು ಆ ಬುಕ್ ಒಳಗಿಟ್ಟು ಲೆಟರ್ ಕೊಟ್ಟು ಇದನ್ನು ನೋಡಿದ್ಮೇಲೆ ಅವನ ರೀ ಆಕ್ಷನ್ ಹೇಗಿರುತ್ತೆ ಅಂತ ಕಲ್ಪನೆ ಮಾಡ್ತಾ ಮನೆಗೆ ಹೋದ್ಳು. ಮಾರನೇ ದಿನ ಆಯ್ತು, ತಿಂಗಳು ಕಳೀತು ........... ನಮ್ ನಾಣಿಯಿಂದ ನೋ ರೀ ಆಕ್ಷನ್. ಅವ್ನು ನಾಗವೇಣಿ ಜೊತೆ ಮಾಮೂಲಾಗಿ ಫ್ರೆಂಡ್ ಥರಾನೇ ಇದ್ದ.
ಇದೆಲ್ಲಾ ಆಗಿ ವರ್ಷಗಳು ಕಳೆದವು. ನಾಗವೇಣಿ ಕಾಲೇಜ್ ಮುಗಿಸಿ ಅಪ್ಪ ತೋರಿಸಿದ ಫಾರಿನ್ ಹುಡುಗನ ಜೊತೆ ಮದುವೆ ಮಾಡ್ಕೊಂಡು ಅಮೆರಿಕಾಗೆ ಹಾರಿ ಹೋದ್ಳು. ಆದ್ರೆ ನಮ್ ನಾಣಿ ಅವಳದೇ ನೆನಪಲ್ಲಿ ಇವತ್ತಿಗೂ ಮದುವೆ ಆಗ್ದೇ ದೇವದಾಸ್ ಥರ ಗಡ್ಡ ಬಿಟ್ಕೊಂಡು ತಿರುಗ್ತಾ ಇದ್ದಾನೆ.
ಈ ಕಥೆಯ ನೀತಿ ಏನಪ್ಪಾಅಂದ್ರೆ ----------------------------------------------------------------------------------------------------------------..........................................................................................................................................................................................................................................................................................................................................................................................................................................................................................................................................................................................................................................................................................................................................................................................................................................................................
-----------------------------------------------------------------------------------------------------------------
ಹುಡುಗರು ಟೆಕ್ಸ್ಟ್ ಬುಕ್ ತೆಗೆದು ನೋಡೋಲ್ಲಾ :) :) :) :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ