ಭಾನುವಾರ, ಮಾರ್ಚ್ 10, 2013

ಮರಳಿ ಬಾ ಅರಳಿ ಬಾ .............

ನಲ್ಲೆ ನಿನ್ನ ಹುಸಿಕೋಪ ಇನ್ನೆಷ್ಟು ದಿನ
ಮನ್ನಿಸಿ ನನ್ನೆಲ್ಲ ತಪ್ಪುಗಳ ಪ್ರೀತಿಸೆನ್ನ

ಅಂದು ನೀ ನನ್ನೊಂದಿಗೆ ಇಟ್ಟ ಪ್ರತಿಹೆಜ್ಜೆ ಗುರುತು
ಎದೆಯಲ್ಲಿ ಅಚ್ಚೊತ್ತಿದೆ, ಹೇಗೆ ಬದುಕಲಿ ಮರೆತು ?

ನಿನಗೆ ಕೊಟ್ಟ ಮಾತುಗಳ ನಾ ಉಳಿಸಿಕೊಳ್ಳಲಿಲ್ಲ
ನಿನಗಾದ ಅಗಾಧ ನೋವಿನ ಅರಿವೆನಗಿಲ್ಲದಿಲ್ಲ

ಪರಿಸ್ಥಿತಿಗಳ ಪಿತೂರಿಯ ಬಲಿಪಶುವು ನಾನು
ಆದರೂ ನೀನಿರದೆ ಇರಲಾರೆ ಇನ್ನು

ನೀನೆನ್ನ ಒಡನಾಡಿ,  ಬದುಕಬೇಕಿದೆ ಒಡಗೂಡಿ
ಓಡದಿರು ನೀನೆಂದು  ಹೃದಯದಿಂದೆನ್ನ ಹೊರದೂಡಿ

ನಿನ್ನದೇ ನೆನಪುಗಳ ಮೆರವಣಿಗೆ ನನ್ನೆದೆಯ ಒಳಗೆ
ಬಂದೆನ್ನ ಬಂಧಿಸಿ  ತೀರಿಸು ವಿರಹದ ಬೇಗೆ

2 ಕಾಮೆಂಟ್‌ಗಳು:

  1. ವಿರಹದ ಕೈಯ್ಯಲ್ಲಿ ಲೇಖನಿ ಕೊಟ್ಟಾಗ ಇಂಥ ಗಾಢವಾದ ಛಾಯೆಗಳು ಮೂಡಿ ನಿಲ್ಲುತ್ತವೆ. ವಿರಹ ಮನಮುಟ್ಟುವಂತೆ ಮಾತಾಡಿದೆ. ಹಿಡಿಸಿತು.

    - ಪ್ರಸಾದ್.ಡಿ.ವಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದ ಪ್ರಸಾದ್, ನಿಮ್ಮ ಮಾತು ಅಕ್ಷರಶಃ ನಿಜ. ಭಗ್ನ ಪ್ರೇಮ, ವಿರಹ ಇವು ಕೆಲವೊಮ್ಮೆ ಅದ್ಭುತ ಸಾಹಿತ್ಯ ಕೃಷಿಗೆ ಸಾಧನವಾಗಬಲ್ಲವು ಎಂಬುದನ್ನು ಇತಿಹಾಸದುದ್ದಕ್ಕೂ ನಾವು ಕಾಣಬಹುದು.

      ಅಳಿಸಿ