ಶುಕ್ರವಾರ, ಸೆಪ್ಟೆಂಬರ್ 7, 2012

ಬೆಳದಿಂಗಳ ಅಂಗಳದಲ್ಲಿ ........

ಭುವಿಯ ಬೆಳಗಲು ಅನುದಿನವೂ 
ಸೂರ್ಯ - ಚಂದ್ರರ ಜುಗಲ್ ಬಂದಿ
ಇಂದು ಹಗಲೆಲ್ಲ ಸೂರ್ಯನ ಸುಳಿವಿಲ್ಲ 
ಮೋಡಗಳ ಮರೆಯಲ್ಲಿ ಅವಿತಿದ್ದ 


ಚಂದ್ರನಿಗಂತೂ ಇಂದು ಬರುವ 
ಜರೂರತ್ತಿಲ್ಲ
ಅಮಾವಾಸ್ಯೆಯ ಇರುಳು 
ಕರೆದರೂ ಬರಲೊಲ್ಲ 


ನಲ್ಲೆ ನೀ ಬಳಿಯಿರಲು 
ಸೂರ್ಯ ಬಾರದಿದ್ದರೂ ಎನಗಿಲ್ಲ ಚಿಂತೆ 
ಚಂದಿರ ಬಾರದಿರೆ ಏನಂತೆ 
ಅಮಾವಾಸ್ಯೆಯ ಇರುಳೂ ಹಾಲು ಹುಣ್ಣಿಮೆಯಂತೆ 

4 ಕಾಮೆಂಟ್‌ಗಳು:

 1. ಮುನಿಸಿಕೊಂಡ ನಕ್ಷತ್ರ ಬಾನ ಮಾಳಿಗೆಯಲ್ಲಿ ಕುಳಿತುಕೊಂಡರೆ ನಮಗದೇ ಮಿನುಗು ತಾರೆ ಏನಂತೀರ ,,,

  ಅರ್ಥ ಪೂರ್ಣ ಕವನ

  ಪ್ರತ್ಯುತ್ತರಅಳಿಸಿ
 2. ನಿಜ ಭಾಗ್ಯ ಮೇಡಂ....... ನಕ್ಷತ್ರಗಳು ನಖರೆ ಮಾಡದೇ ಬಾನ ಮಾಳಿಗೆಗೆ ಬಂದರೆ ಅದುವೇ ಭಾಗ್ಯ

  ಪ್ರತ್ಯುತ್ತರಅಳಿಸಿ
 3. ಪ್ರಿಯ ವಿಜಯ್, ನಿಮ್ಮ ಬ್ಲಾಗ್ ಗೆ ಬೇಟಿ ನೀಡಿ ಸಂತೋಷವಾಯಿತು,ನಿಮ್ಮ ಅಭಿರುಚಿಗಳು ಇಷ್ಟವಾದವು, ಒಮ್ಮೆ ಬೇಟಿ ನೀಡಿ ನನ್ನ ಮನೆಗೆ ವಿಳಾಸ.riyazsagar.blogspot.com

  ಪ್ರತ್ಯುತ್ತರಅಳಿಸಿ