ನೀ ಹೊಸೆಯಲೆಂದು ಹೊಸ ಕವಿತೆ
ನಲ್ಲೆ ನಾ ನಿನ್ನ ಬಳಿಯಲ್ಲೇ ಕುಳಿತೆ
ನೀ ಬರೆಯಲಿಲ್ಲ ಒಂದೂ ಸಾಲು
ದೂರಾದೆ - ಈಗ ಕವಿತೆಗಳ ಸಾಲು ಸಾಲು
...................................................................................................................
ನಿನ್ನ ಮೊಗದಲ್ಲಿ ಅರಳಿದ
ಹೂನಗೆಯ ಕಂಡಾಗ
ಆ ಚೆಲುವ ನೋಡಿ
ಮಲ್ಲಿಗೆಯೂ ನಾಚಿಕೊಂಡಾಗ
ನಾ ಜಗವ ಮರೆತೆ
...................................................................................................................
ನಲ್ಲೆ ನನ್ನ ತೋಳ್ತೆಕ್ಕೆಯಲ್ಲಿ
ನೀ ಬಂಧಿಯಾದ ಕ್ಷಣ
ಜಗದ ಪಾಲಿಗೆ ನಾ
ಕಿವುಡ - ಮೂಗ - ಕುರುಡ
.....................................................................................................
ನೀ ಬಂಧಿಯಾದ ಕ್ಷಣ
ಜಗದ ಪಾಲಿಗೆ ನಾ
ಕಿವುಡ - ಮೂಗ - ಕುರುಡ
.....................................................................................................
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ