ಗುರುವಾರ, ಫೆಬ್ರವರಿ 3, 2011

ಆಳರಸನ ಅಳುಕು


ದೊರೆಯೇ ನಿನಗೂ ಬಂದಿತೆ ದರವೇಶಿ ಸ್ಥಿತಿ
ಕಾಡುತಿಹುದೇ ತಲೆ ಉರುಳುವ ಭೀತಿ


ಅಲ್ಲಿ ದೂರದಲಿ ಪಿರಮಿಡ್ಡಿನೂರಿನಲಿ
ಭೋರ್ಗರೆದು ಭುಗಿಲೆದ್ದಿದೆ ಜನಸಾಗರ
ಇಲ್ಲಿ ನಮ್ಮೂರಿನಲ್ಲಿ ಆಳುವರಸನಿಗೆ ಏನೋ ಅಳುಕು
ದಿನಕೊಂದು ನಾಟಕ- ಹುಡುಕಿದರೆ ಬರೀ ಹುಳುಕು

ತಂತ್ರಗಳ ಹೆಣೆದು ವಿರೋಧಿಗಳನ್ನು ಹಣಿಯುವ
ತಾಂತ್ರಿಕನು ನೀನು
ಯಂತ್ರ-ತಂತ್ರ ಮಾಟ-ಮಂತ್ರಗಳ ಭಯವೇಕೆ ಇನ್ನು

ಇತ್ತ ದೊರೆಸಾನಿ (!?) ಕೊರಗುವಳು
ಎಲ್ಲಿಂದಲೋ ಬಂತೆನಗೆ ಬೆದರಿಕೆಯ ಕರೆ
ಅಶರೀರವಾಣಿ ಮಾಡಿತ್ತು ದೂರವಾಣಿ
ಎಷ್ಟು ಖರೆಯೋ ಎಷ್ಟು ಸರಿಯೋ ಬಲ್ಲವನೊಬ್ಬನೇ ದೊರೆ

ಆಳುವ ನಿಮಗೇ ಇರುವಾಗ ಇಷ್ಟೊಂದು ಅಳುಕು
ಇನ್ನೆಲ್ಲಿ ಹಸನಾಗುವುದು ಪ್ರಜೆಗಳಾ ಬದುಕು
ಇನ್ನೆಷ್ಟು ದಿನ ತಾನೇ ಸಹಿಸಿಯಾರು ಜನ
ದಂಗೆಯೇಳುವ ಮುನ್ನ ತಿದ್ದಿಕೊಂಡರೆ ಚೆನ್ನ


6 ಕಾಮೆಂಟ್‌ಗಳು:

  1. how u use such beautiful kannada words at correct place,your are superb in writing blogs in kannada

    ಪ್ರತ್ಯುತ್ತರಅಳಿಸಿ
  2. ನಲ್ಮೆಯ ಗೆಳತಿ ವೀಣಾ,

    ನಿಮ್ಮ ಹೊಗಳಿಕೆಗೆ ಉಬ್ಬಿ ಹೋಗಿದ್ದೇನೆ...ನಾನು ಮೊದಲೇ ಸ್ವಲ್ಪ ದಪ್ಪ ...ಈಗ ಮತ್ತಷ್ಟು ಉಬ್ಬುವಂತೆ ಮಾಡಿದ್ದೀರಿ..ಧನ್ಯವಾದ.
    ಕನ್ನಡದ ಪದಕೋಶದಲ್ಲಿರುವ ಪ್ರತಿಯೊಂದು ಪದವೂ ಸುಮಧುರ...ಸುಂದರ ಹಾಗೂ ಕರ್ಣಾನಂದಕರ.....ಇಲ್ಲಿ ನನ್ನ ಪಾತ್ರ ಗೌಣ

    ವಿಜಯ್

    ಪ್ರತ್ಯುತ್ತರಅಳಿಸಿ
  3. no problem if you become fat i will give my product to reduce your weight

    ಪ್ರತ್ಯುತ್ತರಅಳಿಸಿ
  4. ವೀಣಾ,

    ನಿಮ್ಮ ವ್ಯಾಪಾರ ತಂತ್ರಕ್ಕೆ ಹ್ಯಾಟ್ಸ್ ಆಫ್. ತಮ್ಮ ವ್ಯಾಪಾರದಲ್ಲಿ ಅಪಾರ ಅಭಿವೃದ್ಧಿ ಯಾಗಲಿ, ಯಶಸ್ಸು ಸದಾ ನಿಮ್ಮೊಂದಿಗಿರಲಿ.
    ವಿಜಯ್

    ಪ್ರತ್ಯುತ್ತರಅಳಿಸಿ
  5. ಪೋಟೋ ಹಾಗು ಶೀರ್ಷಿಕೆ ಒಂದಕ್ಕೊಂದು ಎಷ್ಟು ಪೂರಕವಾಗಿವೆ. ಎಲ್ಲರಂತೆ ತಾವೂ ಹುಲುಮಾನವರು ಅನ್ನೋದನ್ನ ನೆನಪಿಟ್ಟ್ಟುಕೊಂಡರೂ ಸಾಕೇನೋ..
    ಬಿ ಟಿ ಜಾಹ್ನವಿ

    ಪ್ರತ್ಯುತ್ತರಅಳಿಸಿ