ಗುರುವಾರ, ಫೆಬ್ರವರಿ 17, 2011

ಮಜ್ಜಿಗೆಯ ಮಹಾತ್ಮೆ


ಮಜ್ಜಿಗೆಯ ಮಹಾತ್ಮೆ ಬಲು ಚೆಂದ ಗೆಳೆಯ
ಚುರುಗುಡುವ ಬಿಸಿಲಲ್ಲಿ ಬಸವಳಿದು ಬಂದವಗೆ
ತಂಪಿನ ಇಂಪೆರೆಯುವ ಪರಮ ಪೇಯವಿದು
ದುಬಾರಿಯ ಕೋಲಾ-ಪೆಪ್ಸಿಗಳ ಎದುರು
ಹೋರಾಡುವ ಶಕ್ತಿಶಾಲಿ

ಇತಿಹಾಸದುದ್ದಕ್ಕೂ ಓದುವೆವು ನಾವು
ಬಿಳಿಯರ ದಬ್ಬಾಳಿಕೆಯ ವಿರುದ್ಧ
ಕರಿಯರ ಕ್ರಾಂತಿ
ಇಲ್ಲಿ ಎಲ್ಲವೂ ಅದಲು-ಬದಲು
ಕರಿಯರದೇ COLA-ಹಲವಿಲ್ಲಿ
ಗೆಲ್ಲಲಿ ಬೆಳ್ಳಗಿನ ತಂಪು ಮಜ್ಜಿಗೆ

3 ಕಾಮೆಂಟ್‌ಗಳು:

  1. ಇವತ್ತು ಶುಭ ಶನಿವಾರ.. ತಂಪಿನ ಮಜ್ಜಿಗೆ ಕುಡಿಸಿದ್ದೀರಿ... ಹಹಹಹ..! ವಿಜಯ್ ಸರ್ ಈಗ ಮಳೆ...ಶೀತವಾದರೋ ? ನಿಮ್ಮ ಸಂದೇಶ ಅಗತ್ಯವಾಗಿ ಬಂದಿತು.ಧನ್ಯವಾದಗಳು. ಆದರೆ,ಕವಿತೆಯ ಭಾವಚಿತ್ರದಲ್ಲಿ ಮಜ್ಜಿಗೆ ಕುಡಿಯುತ್ತಿರುವವರು ಶ್ರೇಷ್ಠ ಕಥೆಗಾರ ಮಾನ್ಯ ಅಬ್ದುಲ್ ರಶೀದ್ ರಂತೆ ಭಾಸವಾಗುತ್ತಿದೆ...!

    ಪ್ರತ್ಯುತ್ತರಅಳಿಸಿ