ಹಲವರು ಹೇಳುತ್ತಾರೆ ಪ್ರೀತಿ ಕುರುಡು
ಕೆಲವರು ಹೇಳುತ್ತಾರೆ ಪ್ರೀತಿ ಕಿವುಡು
ಪ್ರೀತಿ ಕುರುಡೋ- ಕಿವುಡೋ
ನಾನರಿಯೆ ನಲ್ಲೆ
ಒಂದಂತು ನಾ ಬಲ್ಲೆ
ನೀನಿರದ, ನಿನ್ನ ಒಲವಿರದ .
ಬದುಕು ಬರಡು - ಕನಸು ಬರಿದು
ನೀ ನನ್ನೆಡೆಗೆ ತೋರುವ
ಅಗಾಧ ಪ್ರೀತಿಯ ಕಂಡು
ನಾ ಬೆರಗಾದೆ
ನಿನ್ನೊಲವಿನ ಪರಿಗೆ
ನೀ ತೋರುವ ಕಾಳಜಿಗೆ ನಾ ಮರುಳಾದೆ
ಪ್ರೀತಿ ಕುರುಡಲ್ಲ- ಕಿವುಡಲ್ಲ
ನೋಡುವ ಕಂಗಳು ಕಣ್ಣಿದ್ದೂ ಕುರುಡಾದುವಲ್ಲ
Pushparaj Chauta Shirva - ನಿಜ, ಪ್ರೀತಿ ಕುರುಡಲ್ಲ. ಜೀವನದಲಿ ಒಲವ ಭಾಷೆ ಅರ್ಥೈಸಿಕೊಂಡಾಗಲೇ ಸಾಕ್ಷಾತ್ಕಾರವಾಗುವುದು ಸತ್ಯ. ಉತ್ತಮ ರಚನೆ ವಿಜಯ್.
ಪ್ರತ್ಯುತ್ತರಅಳಿಸಿMohan V Kollegal - ಚೆನ್ನಾಗಿದೆ ವಿಜಯಣ್ಣ... ಗಡಿಯಿಲ್ಲದ ಭಾವನೆಯನ್ನು ಕೆಲವೇ ಸಾಲುಗಳಲ್ಲಿ ಹಂಚಿಕೊಂಡದ್ದು ಇಷ್ಟವಾಯಿತು....
ಪ್ರತ್ಯುತ್ತರಅಳಿಸಿಪ್ರೀತಿ ಕುರುಡಲ್ಲ- ಕಿವುಡಲ್ಲ
ನೋಡುವ ಕಂಗಳು ಕಣ್ಣಿದ್ದೂ ಕುರುಡಾದುವಲ್ಲ - ಈ ಸಾಲುಗಳು ತುಂಬಾ ಇಷ್ಟವಾಯಿತು.. ನೋಡುವ ಕಂಗಳು ಶುದ್ಧ ಪ್ರೀತಿ ಮತ್ತು ಗಟ್ಟಿ ಒಡನಾಟವನ್ನು ಅರ್ಥ ಮಾಡಿಕೊಳ್ಳಲಿ....
Prasad V Murthy - ಪ್ರೀತಿ ಕಿವುಡೂ ಅಲ್ಲ, ಪ್ರೀತಿ ಕುರುಡೂ ಅಲ್ಲ ಆದರೆ ಪ್ರೀತಿಯಲ್ಲಿ ಬೀಳುವ ಮನಗಳು ಹಿರಿಯರ ಹಿತವಚನಗಳಿಗೆ ಕಿವುಡರಾಗುವುದು ಮತ್ತು ತಮ್ಮ ಪ್ರೇಮಿಗಳ ಮನದಲ್ಲಿನ ಹುಳುಕುಗಳನ್ನು ಅರಿಯುವಲ್ಲಿ ಕುರುಡರಾಗುವುದು ಸುಳ್ಳಂತು ಅಲ್ಲ.. ಪ್ರೀತಿಯೆಂಬುದು ಮನಸ್ಸಿನ ದಿವ್ಯತೆಗೆ ಮಾತ್ರ ಅರಿವಾಗುವ ಮಧುರಾನುಭೂತಿ, ಅದನ್ನು ಹಾಗೆಯೇ ಪರಿಶುದ್ದವಾಗಿರಿಸಿಕೊಳ್ಳುವ ತಾಳ್ಮೆ ಶ್ರದ್ಧೆ ನಮ್ಮಲ್ಲಿರಬೇಕಾಗುತ್ತದೆ.. ಚೆಂದವಾದ ಕವಿತೆ ವಿಜಯಣ್ಣ..:)))
ಪ್ರತ್ಯುತ್ತರಅಳಿಸಿBanavasi Somashekhar - ವ್ಹಾ! ಮನಮೋಹಕವಾದ ವಿಶಾಲ ದೃಷ್ಠೀಕೋನ ಹೊಂದಿದ ಕವಿತೆ.ನೋಡುವ ಕಂಗಳ ನೋಟವೇ ಚಂಚಲವಿರುವಾಗ ಪ್ರೀತಿಯ ಅರ್ಥವನ್ನಾದರೂ ಹೇಗೆ ವಿಷದೀಕರಿಸುವರು? ಈ ಪ್ರಶ್ನೆಯನ್ನಿಟ್ಟುಕೊಂಡು ಮನದಾಳದಿಂದ ಮೂಡಿದ ಸುಂದರ ಕವಿತೆ.
ಪ್ರತ್ಯುತ್ತರಅಳಿಸಿAmbika Bv - ಚೆನ್ನಾಗಿದೆ, ಪ್ರೀತಿ ಕುರುಡಲ್ಲ ಎಲ್ಲವು ನಾವು ನೋಡುವ ದೃಷ್ಟಿಯಲ್ಲಿರುತ್ತದೆ
ಪ್ರತ್ಯುತ್ತರಅಳಿಸಿSundara prema kaavya...
ಪ್ರತ್ಯುತ್ತರಅಳಿಸಿ