ಸೋಮವಾರ, ಸೆಪ್ಟೆಂಬರ್ 27, 2010

ಹೋಗಿಬಾ ಗೆಳತಿ..............


ನಲ್ಲೆ ನೀ ಹೇಳಿದೆ-ನಮ್ಮಿಬ್ಬರ ಪ್ರೀತಿ ಅವಿವೇಕ,ದುಡುಕು
ಆದರೆ ನನಗಂತೂ ಆ ಪ್ರೀತಿಯೇ ಬದುಕು

ನೀ ಸಿಗದಿದ್ದರೂ ನಲ್ಲೆ
ಮತ್ತೊಬ್ಬಳ ನಾ ಒಲ್ಲೆ
ಸಾಕೆನಗೆ ನಿನ್ನ ಮುಗುಳ್ನಗೆಯ
ಸವಿಯಾದ ನೆನಪು......

ಹೋಗುವುದಾದರೆ ಹೋಗಿಬಿಡು ಮತ್ತೆ ಬಾರದಿರು ನೀ ಇತ್ತ
ಕದಡಿ ಕಂಗೆಡಿಸಬೇಡ ಇರುವುದೊಂದೇ ಚಿತ್ತ

ಬದುಕಾಗಿ ನೀ ಬಂದೆ ಬೆಳಕನ್ನು ನೀ ತಂದೆ
ಕಾರಣವ ಹೇಳದೇ ನೀ ಮರೆಯಾಗಿ ಹೋದೆ

ಸೋಲು ಅಪಮಾನ ಹೊಸತಲ್ಲ ನನಗೆ
ಸಾವೆಂಬ
ಸಂಗಾತಿ ಕೈಹಿಡಿವವರೆಗೆ
ನಿನ್ನನ್ನೇ ನೆನೆಯುತ್ತ ಬದುಕಿರುವೆ ಹೀಗೆ.....

7 ಕಾಮೆಂಟ್‌ಗಳು:

 1. ಬಿಟ್ಟು ಹೋದವಳಿಗೊಂದು ಥ್ಯಾಂಕ್ಸ್ ಹೇಳಿಬಿಡಿ. ಚಂದವಿದೆ ಕವಿತೆ.

  ಪ್ರತ್ಯುತ್ತರಅಳಿಸಿ
 2. ಎಂದೆಂದೂ ನಿನ್ನನು ಮರೆತು ನಾನಿರಲಾರೆ....ಅಂತಾನೂ ಹೇಳಬಹುದು

  ಪ್ರತ್ಯುತ್ತರಅಳಿಸಿ
 3. ಚೋಡದೆ ಸಾರಿ ದುನಿಯಾ ಕಿಸೀಕೆಲಿಯೆ
  ಯೆ ಮುನಾಸಿಬ್ ನಹೀ ಆದಮಿ ಕೇಲಿಯೆ...
  ಬಿ ಟಿ ಜಾಹ್ನವಿ

  ಪ್ರತ್ಯುತ್ತರಅಳಿಸಿ
 4. ಹೋದವಳಿಗಾಗಿ ಮರುಗೋ ಪದ್ಯ
  ಚೆನಾಗಿದೆ.

  ಪ್ರತ್ಯುತ್ತರಅಳಿಸಿ
 5. ಸಾವೆಂಬ ಸಂಗಾತಿ ಕೈಹಿಡಿವವರೆಗೆ
  ನಿನ್ನನ್ನೇ ನೆನೆಯುತ್ತ ಬದುಕಿರುವೆ ಹೀಗೆ.....
  ಚಂದವಿದೆ ಕವಿತೆ

  ಪ್ರತ್ಯುತ್ತರಅಳಿಸಿ
 6. ಸಾವೆಂಬ ಸಂಗಾತಿ ಕೈಹಿಡಿವವರೆಗೆ
  ನಿನ್ನನ್ನೇ ನೆನೆಯುತ್ತ ಬದುಕಿರುವೆ ಹೀಗೆ....
  ಚಂದವಿದೆ ಕವಿತೆ.

  ಪ್ರತ್ಯುತ್ತರಅಳಿಸಿ