ಗುರುವಾರ, ಏಪ್ರಿಲ್ 14, 2011

ಅವಳ ಮನದಾಳ-೦೨

ದ್ವಂದ್ವ

ಹುಡುಕುತ್ತಾ ಬಂದ ಸೋಲುಗಳು ನನ್ನ
ಜೀವಂತ ಶವವಾಗಿಸಿದವು 
ನಾ ಬದುಕಿದ್ದೇನೆ ಅಷ್ಟೇ...
ನನ್ನೊಳಗೆ ನಾನಿಲ್ಲ...


ನನ್ನೀ ಬಾಳಲ್ಲಿ ನಲ್ಲ ನೀ ಬಂದೆ 
ಬತ್ತಿಹೋದ ಹೃದಯದಲಿ ಒಲವನ್ನು ತಂದೆ
ಉಸಿರಾಯ್ತು ಪ್ರೀತಿ
ಈಗ ಅದೇ ಪ್ರೀತಿ ಉಸಿರು ಕಟ್ಟಿಸಿದೆ 


ಮಿದುವಾದ ತನು-ಮನ, ವಂಚಿಸುವ ಜನ
ಹಿತನುಡಿಯನಾಡಿ ಓಡಿಹೋದ ಗೆಳೆಯ
ಮಾಗಿದ ಮನದಲ್ಲಿ ಮೊಗ್ಗಾದ ಹರೆಯ 
ಇಂದೇಕೋ ಮನಸು ಭಿನ್ನ-ಖಿನ್ನ

ಮಣ್ಣಾಗಿ ಮಲಗುವುದು ಬಾಕಿಯುಳಿದಿರುವಾಗ
ಮತ್ತೆ ಬದುಕುವ ಕನಸ ಕಟ್ಟಿಕೊಟ್ಟ ಇನಿಯ 
ನೀ ಮರಳಿ ಬರುವೆಯಾ!!!??
ಪ್ರಶ್ನೆ ಹಾಗೆ ಉಳಿದಿದೆ, ಒಳಗೇನೋ ದ್ವಂದ್ವ 



13 ಕಾಮೆಂಟ್‌ಗಳು:

  1. Rashmi Alva - ಸುಂದರ ಸಾಲುಗಳು. ಅರ್ಥ ಗರ್ಭಿತ ವಾಗಿದೆ

    ಪ್ರತ್ಯುತ್ತರಅಳಿಸಿ
  2. Sujatha Vishwanath - ಮಣ್ಣಾಗಿ ಮಲಗುವುದು ಬಾಕಿಯುಳಿದಿರುವಾಗ
    ಮತ್ತೆ ಬದುಕುವ ಕನಸ ಕಟ್ಟಿಕೊಟ್ಟ ಇನಿಯ
    ನೀ ಮರಳಿ ಬರುವೆಯಾ!!!??
    ಪ್ರಶ್ನೆ ಹಾಗೆ ಉಳಿದಿದೆ, ಒಳಗೇನೋ ದ್ವಂದ್ವ .....ಸುಂದರ ಸಾಲುಗಳು.......

    ಪ್ರತ್ಯುತ್ತರಅಳಿಸಿ
  3. Paresh Saraf - ನನ್ನೀ ಬಾಳಲ್ಲಿ ನಲ್ಲ ನೀ ಬಂದೆ
    ಬತ್ತಿಹೋದ ಹೃದಯದಲಿ ಒಲವನ್ನು ತಂದೆ
    ಉಸಿರಾಯ್ತು ಪ್ರೀತಿ
    ಈಗ ಅದೇ ಪ್ರೀತಿ ಉಸಿರು ಕಟ್ಟಿಸಿದೆ ಬಹಳ ಭಾವಪೂರ್ಣ ಸಾಲುಗಳು ವಿಜಯ್ ಸರ್.. ಚೆನ್ನಾಗಿದೆ.. ಶುಭವಾಗಲಿ :)

    ಪ್ರತ್ಯುತ್ತರಅಳಿಸಿ
  4. Nataraju Seegekote Mariyappa - ಚಂದದ ಸಾಲುಗಳು ವಿಜಯಣ್ಣ.. ಶುಭವಾಗಲಿ :))

    ಪ್ರತ್ಯುತ್ತರಅಳಿಸಿ
  5. Banavasi Somashekhar - ಮಣ್ಣಾಗಿ ಮಲಗುವುದು ಬಾಕಿಯುಳಿದಿರುವಾಗ
    ಮತ್ತೆ ಬದುಕುವ ಕನಸ ಕಟ್ಟಿಕೊಟ್ಟ ಇನಿಯ
    ನೀ ಮರಳಿ ಬರುವೆಯಾ!!!??
    ..............ಮಾಧುರ್ಯತುಂಬಿದ ಸುಂದರ ಸಾಲುಗಳು.ಇಡೀ ಕವಿತೆಯೇ ಅರ್ಥಪೂರ್ಣ.

    ಪ್ರತ್ಯುತ್ತರಅಳಿಸಿ
  6. Vasanth Kumar - ಭಾವಪೂರ್ಣ ಸಾಲುಗಳ ಪರಿಣಾಮಕಾರೀ ಸಂಯೋಜನೆ..

    ಪ್ರತ್ಯುತ್ತರಅಳಿಸಿ
  7. ಪ್ರವೀಣ ಕುಲಕರ್ಣಿ - ಒಂದು ಕತೆಯಂತೆ ಸುಳಿದು ಹೋಗುವ ಈ ಕವನ ಹೃದಯದಲ್ಲಿ ಮನೆ ಮಾಡಿತು. ಖುಷಿಯಾಯಿತು.. ಶುಭವಾಗಲಿ

    ಪ್ರತ್ಯುತ್ತರಅಳಿಸಿ
  8. Hussain Muhammed - ಒಂದೇ ಕವಿತೆಯಲ್ಲಿ ಜೀವನದ ವಿವಿಧ ಆಯಾಮಗಳು ಪರಿಣಾಮಕಾರಿಯಾಗಿ ಮೂಡಿಬಂದಿದೆ ... ಚೆನ್ನಾಗಿದೆ ಗೆಳೆಯಾ

    ಪ್ರತ್ಯುತ್ತರಅಳಿಸಿ
  9. Bellala Gopinath Rao - ಕವನದ ಆಂತರ್ಯ ಚೆನ್ನಾಗಿದೆ
    ಇಷ್ಟವಾಯ್ತು

    ಪ್ರತ್ಯುತ್ತರಅಳಿಸಿ