ಸೋಮವಾರ, ಮೇ 23, 2011

ಬಾನಿನತ್ತ.....ಹಾರುತ್ತ...

ಅಷ್ಟಗಲ ಆಗಸದಿ
ಎಷ್ಟೊಂದು ಹಕ್ಕಿಗಳು
ಆಸೆಯಾಗುತಿದೆ 'ಹೇಗಾದರೂ ಮಾಡಿ
ಹೆಕ್ಕಬೇಕಿದೆ ಹಾದಿ'
ಹಾರಿ ಸೇರಲೇಬೇಕು ಮುಗಿಲ ಹಾದಿ   




ಬಾನ ಎತ್ತರಕೇರಿ
ಮೋಡದೊಳಗಡೆ ತೂರಿ
ಹಾರುವಾಸೆಯು ಎನಗೆ ಕಲಿಸಿ ಹೇಗೆ?
ಗೂಡನೊಂದನು ಕಟ್ಟಿ, ಕೊಕ್ಕಲ್ಲಿ ಹಿಡಿದು ರೊಟ್ಟಿ
ಕಂದಗೆ ತಂದುಣಿಸುವ ಕಲೆಯ ತಿಳಿಸಿ ಎನಗೆ






ನಿಮ್ಮಂತೆಯೇ ನಾನು
ಪಡೆಯಬೇಕಿದೆ ರೆಕ್ಕೆ
ಹಾರಬೇಕಿದೆ ದೂರ ದೂರ......
ಸಪ್ತಸಾಗರ ದಾಟಿ, ಎಲ್ಲ ಎಲ್ಲೆಯ ಮೀಟಿ
ಕಾಣಬೇಕಿದೆ ಹೊಸತು ಬದುಕ ಸಾ

3 ಕಾಮೆಂಟ್‌ಗಳು:

  1. ಗೆಳೆಯ
    ಈ ಕವನದಲ್ಲಿ ತೀವ್ರತೆ, ಸೆಳೆತ ಮತ್ತು ಸುಪ್ತ ಮನೋವಾಂಛೆ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಇತರೆ ಬರಹಗಳನ್ನು ನಾನು ಓದುತ್ತೇನೆ.

    ನನ್ನ ಬ್ಲಾಗಿಗೂ ಬನ್ನಿ :
    www.badari-poems.blogspot.com
    www.badari-notes.blogspot.com
    www.badaripoems.wordpress.com

    ಪ್ರತ್ಯುತ್ತರಅಳಿಸಿ
  2. ವಿಜಯ್ ಸರ್. ತುಂಬಾ ಚೆಂದದ ಭಾವ ಪಕ್ವತೆಯ ಕವಿತೆ. ಸುಂದರವಾದ ಭಾವದಲ್ಲಿ ಕಂಡುಕೊಂಡ ಲಯ ಅಮೃತ ಕುಡಿದಷ್ಟು ಸಂತಸ ತರುತ್ತವೆ. ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  3. ರವಿ ಸರ್, ಧನ್ಯವಾದಗಳು .....ನಿಮ್ಮ ಮೆಚ್ಚುಗೆಯ ಮಾತು ಕಂಡು ಹಿಗ್ಗಿದ್ದೇನೆ.

    ಪ್ರತ್ಯುತ್ತರಅಳಿಸಿ