ಶನಿವಾರ, ಜನವರಿ 28, 2012

ನಾ ಮಹಾತ್ಮನಾಗಲಿಲ್ಲ........

ಅದೊಂದು ಉದ್ಯಾನ
ಉದ್ಯಾನದೊಳಗೊಂದು
ಮಹಾತ್ಮನ ಪ್ರತಿಮೆ

ಮಹಾತ್ಮನೆಡೆಗೆ ನಿರ್ಲಿಪ್ತ ನೋಟ 
ಬೀರುತ್ತಾ ನಿಂತಿದ್ದನಲ್ಲೊಬ್ಬ ವೃದ್ದ
ತನ್ನಲ್ಲೇ ಏನನ್ನೋ ಹೇಳಿಕೊಳ್ಳುತ್ತಾ

ಅಯ್ಯಾ ನನಗೀಗ ವಯಸ್ಸು ಎಂಭತ್ತು
ನೀ ಎಂಭತ್ತರ ಹೊಸ್ತಿಲಲ್ಲೇ ಗುಂಡೇಟಿಗೆ 
ನಿನ್ನ ಗುಂಡಿಗೆಯ ಕೊಟ್ಟೆ 

ಅಷ್ಟರಲ್ಲಾಗಲೇ ನೀ 
ಮಹಾತ್ಮನಾಗಿದ್ದೆ, ಜನಮಾನಸದಲ್ಲಿ 
ಮನೆಯ ಮಾಡಿದ್ದೆ 

ನಾನಿಂದು ಬದುಕಿದ್ದೇನೆ 
ಭೂಮಿಗೆ ಭಾರವಾಗಿ, ಮನೆಯವರಿಗೆ
ಬೇಡವಾಗಿ.......ತೊಡಕಾಗಿ 

ಸತ್ವಹೀನ ನನ್ನ ಬದುಕು-
ಸತ್ಯಕ್ಕೆ ನೀನಾದೆ ಬೆಳಕು, 
ನಿನ್ನಂತೆ ನಾ ಬದುಕಲೇ ಇಲ್ಲ.....ಬದುಕಿದ್ದೇನೆ ಅಷ್ಟೇ  

"ನೀ ಮಹಾತ್ಮನಾಗದಿದ್ದರೆ ಏನಂತೆ  ನೀ 
ದುರಾತ್ಮನಾಗಲಿಲ್ಲ, ಅದಕಿಂತ ಬೇರೇನು ಬೇಕು
 ಬದುಕಿರುವವರೆಗೂ ನೀ ನಗುನಗುತಾ ಬದುಕು"

ಅಶರೀರವಾಣಿಯೊಂದು ನುಡಿದ ಹಾಗಾಗಿ
ವೃದ್ದ ತಾ ಬೆರಗಾಗಿ ಸಾಗಿದನು ಮನೆಯತ್ತ 
ಆನಂದವಾಗಿ.............






16 ಕಾಮೆಂಟ್‌ಗಳು:

  1. Pushparaj Chauta Shirva - ಒಂದು ಒಳ್ಳೆಯ ಸಂದೇಶ ಹೊತ್ತ ಕವನ ಪ್ರತಿಮೆ . ಆತ್ಮ ಮಹಾತ್ಮನಾಗುವುದು ಅನ್ಯರಿಗೆ ಕೇಡು ಬಯಸದೇ ಇದ್ದ ಪಕ್ಷದಲ್ಲಿ. ಇದು ಸತ್ಯ

    ಪ್ರತ್ಯುತ್ತರಅಳಿಸಿ
  2. Manjunatha Maravanthe - ದುರಾತ್ಮನಾಗದಿರುವುದೇ ಸಹಾಸ ಅಲ್ಲವೇ ಈ ಕಾಲದಲ್ಲಿ.
    ಚನ್ನಾಗಿದೆ.

    ಪ್ರತ್ಯುತ್ತರಅಳಿಸಿ
  3. Bhaskar Hegde Honnavar - ತುಂಬಾ ಚೆನ್ನಾಗಿದೆ ವಿಜಯ್ ಸರ್

    ಪ್ರತ್ಯುತ್ತರಅಳಿಸಿ
  4. Prasad V Murthy - ಒಬ್ಬ ಮಾಹಾತ್ಮನ ಪ್ರತಿಮೆಯನ್ನು ಜೀವನದ ಮತ್ತೊಂದು ಮಜಲಿನ ಪಾಠವನ್ನು ನಿವೇಧಿಸಲು ಬಳಸಿಕೊಂಡ ಬಗೆ ತುಂಬಾ ಹಿಡಿಸಿತು.. ತುಂಬಾ ಸೂಕ್ಷ್ಮವಾದ ವಿಚಾರಧಾಟಿಗಳಲ್ಲಿ ಹೊರಳಿದ ಕವಿತೆ ಕಡೆಯಲ್ಲಿ ಹೇಳ ಹೊರಟ ಜೀವನದ ಸಾರ ಮನಸ್ಸನ್ನು ಸಮ್ಮೋಹನಗೊಳಿಸುತ್ತದೆ.. ತುಂಬಾ ಚೆಂದದ ಕವಿತೆ..:)))
    ಸತ್ವಹೀನ ನನ್ನ ಬದುಕು-
    ಸತ್ಯಕ್ಕೆ ನೀನಾದೆ ಬೆಳಕು,
    ನಿನ್ನಂತೆ ನಾ ಬದುಕಲೇ ಇಲ್ಲ.....ಬದುಕಿದ್ದೇನೆ ಅಷ್ಟೇ
    ಈ ಸಾಲುಗಳಲ್ಲಿನ ಸೂಕ್ಷ್ಮತೆಯ ವಿಸ್ತಾರ ಮನಸ್ಸನ್ನು ಚಿಂತನೆಗಚ್ಚಿ, ಓದುಗನಿಗೆ ತುಂಬಾ ಹಿಡಿಸುತ್ತದೆ..

    ಪ್ರತ್ಯುತ್ತರಅಳಿಸಿ
  5. Bellala Gopinath Rao - ‎"ನೀ ಮಹಾತ್ಮನಾಗದಿದ್ದರೆ ಏನಂತೆ ನೀ
    ದುರಾತ್ಮನಾಗಲಿಲ್ಲ, ಅದಕಿಂತ ಬೇರೇನು ಬೇಕು
    ಬದುಕಿರುವವರೆಗೂ ನೀ ನಗುನಗುತಾ ಬದುಕು"

    ತುಂಬಾ ಚೆನ್ನಾಗಿದೆ .......ಕವನದಲ್ಲಿನ ..ಬೆಳಕು

    ಪ್ರತ್ಯುತ್ತರಅಳಿಸಿ
  6. Ravi Murnad - ಸುಂದರ ಪಕ್ವತೆಯ ಕವಿತೆ. ದೇಹರೂಪಿ ಮಹಾತ್ಮನಿಗಿಂತಲೂ ಆತ್ಮರೂಪಿ ದೇವರು ನಾವು.ನಮ್ಮೊಳಗೇ ನಾವೇ ಕಲೆತರೆ ಅದು ಪ್ರಖರವಾಗಿ ಬೆಳಗುವುದು.

    ಪ್ರತ್ಯುತ್ತರಅಳಿಸಿ
  7. Sujatha Lokesh - ಬಾಪು ಸ್ಮರಣೆ ! ಇಂದಿಗೆ ಈ ಕವನ ಸೂಕ್ತವಾಗಿದೆ .

    ಪ್ರತ್ಯುತ್ತರಅಳಿಸಿ
  8. ನೂರು ಕಾಲ ಬುದುಕಿದೆವು ಎನ್ನುವುದಕ್ಕಿಂತ ಇದ್ದ ಮೂರು ದಿನ ಹೇಗೆ ಬದುಕಿದೆವು ಎನ್ನುವುದು ನಮ್ಮ ಬದುಕಿಗೆ ಸಾರ್ಥಕ್ಯ ತಂದುಕೊಡುವಂತವು....
    ಚಂದದ ಕವನ

    ಪ್ರತ್ಯುತ್ತರಅಳಿಸಿ
  9. ನೂರು ಕಾಲ ಬುದುಕಿದೆವು ಎನ್ನುವುದಕ್ಕಿಂತ ಇದ್ದ ಮೂರು ದಿನ ಹೇಗೆ ಬದುಕಿದೆವು ಎನ್ನುವುದು ನಮ್ಮ ಬದುಕಿಗೆ ಸಾರ್ಥಕ್ಯ ತಂದುಕೊಡುವಂತವು....
    ಚಂದದ ಕವನ

    ಪ್ರತ್ಯುತ್ತರಅಳಿಸಿ
  10. @ ಮೌನರಾಗ, ನಿಮ್ಮ ಮಾತು ನೂರಕ್ಕೆ ನೂರು ಸತ್ಯ....ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಆಭಾರಿ ಗೆಳೆಯರೇ

    ಪ್ರತ್ಯುತ್ತರಅಳಿಸಿ
  11. Yeji Sheshadri - ‎"ನೀ ಮಹಾತ್ಮನಾಗದಿದ್ದರೆ ಏನಂತೆ ನೀ

    ದುರಾತ್ಮನಾಗಲಿಲ್ಲ, ಅದಕಿಂತ ಬೇರೇನು ಬೇಕು

    ಬದುಕಿರುವವರೆಗೂ ನೀ ನಗುನಗುತಾ ಬದುಕು"
    ................ ಸುಂದರ ಸಾಲುಗಳು , ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  12. Banavasi Somashekhar - ನಮ್ಮೊಳಗಿನ ಆತ್ಮಕ್ಕೆ ಚೇತನವ ನೀಡಿ ಬದುಕಿಗೆ ಭರವಸೆ ತಂದುಕೊಳ್ಳುವ ಇಂಥ ಸಾಹಿತ್ಯ ಕೃಷಿಯು ನೂರ್ಕಾಲ ಉಳಿದು ಮೆಲುಕು ಹಾಕಿಸುವುದು.ಮನ ಮುಟ್ಟು ಈ ಕವನ ತುಂಬಾ ಿಷ್ಟವಾಯಿತು.

    ಪ್ರತ್ಯುತ್ತರಅಳಿಸಿ
  13. Abdul Satthar Kodagu ವಾಹ್... ಅದ್ಭುತ. ಅಪರೂಪಕ್ಕೊಮ್ಮೆ ಕಾಣಸಿಕ್ಕುವ ಇಂತಹಾ ಕವಿತೆ ಸೃಷ್ಟಿಸುವಲ್ಲಿನ ನಿಮ್ಮ ಕವಿಯೊಬ್ಬನಿಗೆ ನನ್ನ ಸಲಾಂ..

    ಪ್ರತ್ಯುತ್ತರಅಳಿಸಿ
  14. Vasanth Kumar ತುಂಬಾ ಚೆನ್ನಾಗಿದೆ ವಿಜಯ್‌ರವರೆ!! ಉಪಕಾರ ಮಾಡಲಾಗದಿದ್ದರೂ.. ಉಪಟಳ ಕೊಡದೆ ಬದುಕುವುದೇ ನಿಜವಾದ ಬದುಕು...

    ಪ್ರತ್ಯುತ್ತರಅಳಿಸಿ
  15. ಮಹಾತ್ಮನೆಂಬುವ ಪಟ್ಟ ಜಗದ್ವಿಖ್ಯಾತ ಸ್ಥಾನ ಕಲ್ಪಿಸಲೇ ಬೇಕೆಂದೇನೂ ಇಲ್ಲ. ಇದ್ದ ಪರಿಸರದಲ್ಲೇ ತಾವು ಆಗಬಹುದು ಮಾನವ. ವಾವ್ ಒಟ್ಟಾರೆ ಮನಸ್ಸಿಗೆ ನಾಟುವ ಕವನ.

    ಪ್ರತ್ಯುತ್ತರಅಳಿಸಿ